Saturday, May 14, 2011

ಕನಸಿನ ಮನಸು

ಮನಸು ಕರೆಯಿತು ನಿನ್ನಾ ಮನಸಾ
ಕನಸು ಕಂಡಿತು ನಿನ್ನಾ ಕನಸಾ
ಮನಸು ಮಾಡಿತು ನಿನ್ನಾ ಮನಸಾ
ಕನಸು ಕಂಡಿತು ನಿನ್ನಾ ಕನಸಾ ||ಪ||

ಮನಸು ಮುರಿಯಿತು ನಿನ್ನಾ ಕನಸು
ಕನಸು ಒಡೆಯಿತು ನಿನ್ನಾ ಮನಸು
ಬಳಲಿ ಬೆಂದಿತು ನಿನ್ನಾ ಸೆರೆಯೊಳು
ಅರಸಿ ಬಂದಿತು ನಿನ್ನಾ ಆಸರೆಯೊಳು ||೧||

ಮಳೆಯಂತೆ ಸುರಿಯಿತು ನಿನ್ನಾ ಮನಸು
ಚಳಿಯಂತೆ ಕೊರೆಯಿತು ನಿನ್ನಾ ನೆನಪು
ಸಿಡಿಲಂತೆ ಬಡೆಯಿತು ನಿನ್ನಾ ಕನಸು
ಮಿಂಚಂತೆ ಹೊಳೆಯಿತು ನಿನ್ನಾ ನೆನಪು ||೨||

ಮೊಗ್ಗಂತೆ ಮುದುಡಿ ಹೂವಾಗಿ ಅರಳಿ
ಬಿಸಿಲಲಿ ಹೊಳೆದು ಇರುಳಲಿ ಸೊರಗಿ
ಬಾಡಿ ಹೋಯಿತೇ ನನ್ನಾ ಕನಸು
ಮರತೇ ಹೋಯಿತೇ ನನ್ನಾ ನೆನಪು ||೩||

-ಬಸು

Friday, May 13, 2011

ಅಂತರ್ಮುಖಿ

ನನ್ನ ನಾ ಹುಡುಕ ಹೊರಟೆ
ದಣಿದು ನೀರು ಕುಡಿಯಲು ಹೊರಟೆ
ನೀರಲಿ ನಿನ ಬಿಂಬ ಕಂಡು ಬೆರಗಾದೆ
ನೀನೆ ನಾನೆಂದು ಅರಿತೆ
ನಾನೇ ನೀನೆಂದು ಅರಿತೆ

-ಬಸು

Monday, May 9, 2011

ಬೆಳಗು

ಕತ್ತಲೆಯೊಳು ಕಾದೆ ಬೆಳಕ ತರುವೆಯಂದು
ಹಣತೆಯನು ತಂದೆ ದೀಪ ಬೆಳಗುವೆಯಂದು
ಕಣ್ಣ ರೆಪ್ಪೆಯಡಿ ಕಾಡಿಗೆಯಂತೆ ನೀನು
ಅತ್ತರೆ ಜಾರಿಹೋಗುವೆಯಂದು ಅರಿಯದಾದೆನು ನಾನು.

ಕತ್ತಲೆಯೊಳು ಕಾದೆ ಬೆಳಕ ತರುವೆಯಂದು
ಹಣತೆಯನು ತಂದೆ ದೀಪ ಬೆಳಗುವೆಯಂದು
ಬಾಗಿಲೊಳು ಕಾದೆ ಬಾಳ ನೀಡುವೆಯಂದು
ಬಳಲಿದ ಮನಸೊತ್ತು ಬಂದೆ ಮುದ ನೀಡುವೆಯಂದು

ಕತ್ತಲೆಯೊಳು ಕಾದೆ ಬೆಳಕ ತರುವೆಯಂದು
ಹಣತೆಯನು ತಂದೆ ದೀಪ ಬೆಳಗುವೆಯಂದು
ಹೃದಯ ವೀಣೆಯನು ತಂದೆ ನೀ ನುಡಿಸುವೆಯಂದು
ನೀನೆ ನಾಡಿಯಂದು ಅರಿಯದಾದೆನು ನಾನು

-ಬಸು

Sunday, May 8, 2011

ಮೌನರಾಗ

ಕ್ಷಣದಲಿ ಕಂಡೆನು ನಿನ್ನ
ಮರುಕ್ಷಣದಲಿ ಕಳೆದುಕೊಂಡೆನು ನಿನ್ನ
ಮರುಕ ಪಡುತಿದೆ ಮನಸು ಮೌನರಾಗದಲಿ
ಕೇಳಿಸದೆ ನಿನಗೆ ಅರುಣರಾಗದಲಿ
-ಬಸು