ಮನಸು ಕರೆಯಿತು ನಿನ್ನಾ ಮನಸಾ
ಕನಸು ಕಂಡಿತು ನಿನ್ನಾ ಕನಸಾ
ಮನಸು ಮಾಡಿತು ನಿನ್ನಾ ಮನಸಾ
ಕನಸು ಕಂಡಿತು ನಿನ್ನಾ ಕನಸಾ ||ಪ||
ಮನಸು ಮುರಿಯಿತು ನಿನ್ನಾ ಕನಸು
ಕನಸು ಒಡೆಯಿತು ನಿನ್ನಾ ಮನಸು
ಬಳಲಿ ಬೆಂದಿತು ನಿನ್ನಾ ಸೆರೆಯೊಳು
ಅರಸಿ ಬಂದಿತು ನಿನ್ನಾ ಆಸರೆಯೊಳು ||೧||
ಮಳೆಯಂತೆ ಸುರಿಯಿತು ನಿನ್ನಾ ಮನಸು
ಚಳಿಯಂತೆ ಕೊರೆಯಿತು ನಿನ್ನಾ ನೆನಪು
ಸಿಡಿಲಂತೆ ಬಡೆಯಿತು ನಿನ್ನಾ ಕನಸು
ಮಿಂಚಂತೆ ಹೊಳೆಯಿತು ನಿನ್ನಾ ನೆನಪು ||೨||
ಮೊಗ್ಗಂತೆ ಮುದುಡಿ ಹೂವಾಗಿ ಅರಳಿ
ಬಿಸಿಲಲಿ ಹೊಳೆದು ಇರುಳಲಿ ಸೊರಗಿ
ಬಾಡಿ ಹೋಯಿತೇ ನನ್ನಾ ಕನಸು
ಮರತೇ ಹೋಯಿತೇ ನನ್ನಾ ನೆನಪು ||೩||
-ಬಸು
No comments:
Post a Comment