Saturday, June 15, 2013

ಅಮ್ಮನ ನೆನಪಿನಲಿ
--------------------

ಅಮ್ಮ ನಿನ್ನ ನೆನಪಿನಲಿ
ತೊಳಲಿ ತೊದಲುವ ಕಂದ ನಾನು
ಅಮ್ಮ ನಿನ್ನ ಕನಸಿನಲಿ
ತೊಳಗುವ ಚಂದ್ರ ನಾನು॥ 

ನನ್ನೆಲ್ಲ ಭಾವಗಳಿಗೆ ನನ್ನೆಲ್ಲ ಆಸೆಗಳಿಗೆ
ಮೂರ್ತ ಸ್ವರೂಪವೆ ನೀನು
ನನ್ನೆಲ್ಲ ದುಃಖಗಳಿಗೆ ನನ್ನೆಲ್ಲ ಕಷ್ಟಗಳಿಗೆ
ಮುಕ್ತಿ ರೂಪವೆ ನೀನು॥

ನಿನ್ನೊಡಲ ದೀಪದಲಿ
ಹತ್ತಿಯ ಎಳೆಯಂತ ಬತ್ತಿ ನಾನು
ನಂದಿಸಿದಂತಾಯಿತು ಮಮತೆಯೆಂಬ ಬೆಳಕನು 
ಚಡಪಡಿಸುತಿರುವೆ ಹಗಲುಗನಸಿನ ಕತ್ತಲಲಿ ನಾನು ॥

ಕಡಲ ಸಂಕೋಲೆ ತೊರೆದು
ನಡುವೆ ಮೈಚಾಚಿರುವ ಕಾಲವ ಮೀರಿ
ಈ ದಡವ ತೊರೆದು ಆ ದಡವ ಸೇರಿ
ಕಾತರಿಸುತಿರುವೆ ನಿನ್ನೆದೆಯಲಡಗಲು ನಾನು ॥

-ಬಸು

No comments:

Post a Comment